ಡೆಲ್ಯಾಪ್ಟರ್, ಎಡ್ಮೆ ಎಲಿಜûಬೆತ್ ಮೊನಿಕ
	1890-1943; ಇಂಗ್ಲಿಷ್ ಕಾದಂಬರಿಕಾರ್ತಿ. ಇ.ಎಂ. ಡೆಲಫೀಲ್ಡ್ ಎಂಬ ಹೆಸರಿನಿಂದ ಕೃತಿ ರಚನೆ ಮಾಡಿದ್ದಾಳೆ. ಒಂದನೆಯ ಮಹಾಯುದ್ಧದಲ್ಲಿ ಕೆಲಸ ಮಾಡಿ ತನ್ನ ಅನುಭವಗಳನ್ನು ದಿ ವಾರ್ ವರ್ಕರ್ಸ್ (1918) ಎಂಬ ಕಾದಂಬರಿಯಲ್ಲಿ ಚಿತ್ರಿಸಿದಳು. 1919ರಲ್ಲಿ ಮೇಜರ್ ಆರ್ಥರ್ ಪಾಲ ಡ್ಯಾಷ್‍ವುಡ್ ಎಂಬಾತನನ್ನು ಮದುವೆಯಾಗಿ ಸಿಂಗಪುರದಲ್ಲಿ ಎರಡು ವರ್ಷಗಳಿದ್ದು ಡೆವನ್ನಿಗೆ ಹಿಂದಿರುಗಿದಳು. 

	ಕಾನ್ಸಿಕ್ವೆನ್ಸಸ್ (1919); ದಿವೇ ತಿಂಗ್ಸ್ ಆರ್ (1927); ವಾಟ್ ಇಸ್ ಲವ್ (1928)-ಇವು ಈಕೆಯ ಕಾದಂಬರಿಗಳು. ಮೆಸಲಿನ ಆಫ್ ದಿ ಸಬಬ್ರ್ಸ್ (1924); ವಿಮೆನ್ ಆರ್ ಲೈಕ್ ದಟ್ (1029) ಇವು ಈಕೆಯ ಕಥಾಸಂಕಲನಗಳು. 

ದಿ ಡಯರಿ ಆಫ್ ಎ ಪ್ರೊವಿನ್ಷಿಯಲ್ ಲೇಡಿ (1931); ದಿ ಪ್ರೊವಿನ್ಷಿಯಲ್ ಲೇಡಿ ಗೋಸ್ ಫರ್ದರ್ (1932); ಪ್ರೊವಿನ್ಷಿಯಲ್ ಲೇಡಿ ಇನ್ ಅಮೆರಿಕ (1934); ಪ್ರೊವಿನ್ಷಿಯಲ್ ಲೇಡಿ ಇನ್ ವಾರ್ ಟೈಮ್ (1940)- ಈ ಕಥೆಗಳು ಟೈಮ್ ಅಂಡ್ ಟೈಡ್ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾದುವು. 

	ಟು ಸೀ ಅವರ್‍ಸೆಲ್ವ್‍ಸ್ (1930); ದಿ ಗ್ಲ್ಯಾಸ್‍ವಾಲ್ (1933); ದಿ ಮಲ್ಬೆರಿ ಬುಷ್ (1935)-ಇವು ಈಕೆಯ ನಾಟಕಗಳು. 
(ಎಚ್.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ